ಅದ್ಭುತವಾದ ವ್ಯೂಹರಚನೆ ನಿಮ್ಮನ್ನು 20ನೇ ಶತಮಾನಕ್ಕೆ ಕರೆದೊಯ್ಯುತ್ತದೆ, ಇದು ಇತಿಹಾಸದಲ್ಲಿ ಅತ್ಯಂತ ರಕ್ತಸಿಕ್ತ ಶತಮಾನವಾಗಿದೆ. ಅಧಿಕಾರ ಮತ್ತು ಪ್ರಭಾವಕ್ಕಾಗಿ ಹೋರಾಡಿದ ನಿಜವಾದ ದೇಶಗಳ ನೇತೃತ್ವವಹಿಸಿ. ನಿಮ್ಮ ಯುದ್ಧತಂತ್ರದ ಮತ್ತು ವ್ಯೂಹರಚನೆಯ ಕೌಶಲ್ಯಗಳನ್ನು ಪ್ರದರ್ಶಿಸಿ, ಮಾರಕ ಯುದ್ಧಗಳಲ್ಲಿ ಶತ್ರುಗಳ ವಿರುದ್ಧ ಹೋರಾಡಿ. ಆರ್ಥಿಕ ಅದ್ಭುತವನ್ನು ಸೃಷ್ಟಿಸಿ ಮತ್ತು ನಿಮ್ಮ ರಾಷ್ಟ್ರವನ್ನು ಸಮೃದ್ಧಿಯತ್ತ ಕೊಂಡೊಯ್ಯಿರಿ. ಅದರ ಉಲ್ಲೇಖ ಕೇಳಿದರೆ ಜಗತ್ತೇ ನಡುಗುವಂತೆ ಮಾಡುವ ಅಜೇಯ ಸೈನ್ಯವನ್ನು ನಿರ್ಮಿಸಿ. ನಾಯಕತ್ವದ ಜಗತ್ತಿನಲ್ಲಿ, ಕೇವಲ ಒಬ್ಬನೇ ಇರಲು ಸಾಧ್ಯ!
ಒಬ್ಬ ಮಹಾನ್ ಚಕ್ರವರ್ತಿ, ಬುದ್ಧಿವಂತ ರಾಜ ಅಥವಾ ಪ್ರೀತಿಯ ಪ್ರೆಸಿಡೆಂಟ್ ಆಗಿ. ಯುದ್ಧಗಳು, ವಿಧ್ವಂಸಕ ಕೃತ್ಯಗಳು, ಬೇಹುಗಾರಿಕೆ, ಒಪ್ಪಂದಗಳು ಮತ್ತು ಒಡಂಬಡಿಕೆಗಳು - ಇವು ನಿಮ್ಮ ಮುಂದೆ ಏನಿದೆ ಎಂಬುದರ ಒಂದು ಸಣ್ಣ ಭಾಗ ಮಾತ್ರ. ನಿಮ್ಮ ಸಿಂಹಾಸನ ಕಾಯುತ್ತಿದೆ!
20ನೇ ಶತಮಾನದ ಹೊಸ ಇತಿಹಾಸವನ್ನು ಬರೆಯಿರಿ, ಅದು ಭಯಂಕರ ಸರ್ವಾಧಿಕಾರಿಯಾಗಿರಲಿ ಅಥವಾ ಶ್ರೇಷ್ಠ ಶಾಂತಿಪ್ರಿಯನಾಗಿರಲಿ.
ಗೇಮ್ನ ವೈಶಿಷ್ಟ್ಯಗಳು:
✪ 20ನೇ ಶತಮಾನದ ಆರಂಭದ ಮಹಾನ್ ಸಾಮ್ರಾಜ್ಯಗಳು ಮತ್ತು ರಾಷ್ಟ್ರಗಳಂತಹ ವಾತಾವರಣ
✪ ವಸಾಹತುಶಾಹಿ: ನಕ್ಷೆಯಲ್ಲಿ ಖಾಲಿ ಜಾಗಗಳನ್ನು ಭರ್ತಿ ಮಾಡಿ ಮತ್ತು ಹೊಸ ನಾಡುಗಳನ್ನು ಅನ್ವೇಷಿಸಿ
✪ ಇತರ ದೇಶಗಳ ವಿರುದ್ಧ ಯುದ್ಧಗಳನ್ನು ಘೋಷಿಸಿ ಮತ್ತು ವಿನಂತಿಯ ಮೇರೆಗೆ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ
✪ ವೇಗದ ಮತ್ತು ಅದ್ಭುತ ಯುದ್ಧಗಳು: ಶತ್ರುಗಳ ಶಕ್ತಿಯನ್ನು ನುಚ್ಚು ನೂರಾಗಿಸಿ ಅಥವಾ ವೈಟ್ ಫ್ಲ್ಯಾಗ್ ಅನ್ನು ಮೇಲಕ್ಕೆತ್ತಿ
✪ ಲೀಗ್ ಆಫ್ ನೇಷನ್ಸ್: ನಿರ್ಣಯಗಳನ್ನು ಪ್ರಸ್ತಾಪಿಸಿ ಮತ್ತು ಇತರರಿಗೆ ಮತ ಚಲಾಯಿಸಿ, ಮತಗಳಿಗಾಗಿ ಲಂಚ ನೀಡಿ
✪ ಅರ್ಥವಾಗುವ ತಂತ್ರಗಳು: ಆರ್ಥಿಕತೆ, ಮಿಲಿಟರಿ ಮತ್ತು ರಾಜಕೀಯ
✪ ಆಳ್ವಿಕೆ ಮಾಡಲು 60 ಕ್ಕೂ ಹೆಚ್ಚು ದೇಶಗಳು
✪ ಭೂಮಿ, ಸಮುದ್ರದ ಮೇಲೆ ಹಾಗೂ ವಾಯುವಿನಲ್ಲಿ ಅದ್ಭುತವಾದ ಯುದ್ಧಗಳು
✪ ಆಧುನಿಕ ಕಾಲದ ಸೈನ್ಯ: ಟ್ಯಾಂಕ್‌ಗಳು, ಬಾಂಬರ್‌ಗಳು, ಜಲಾಂತರ್ಗಾಮಿಗಳು, ಯುದ್ಧನೌಕೆಗಳು, ಫಿರಂಗಿ ಮತ್ತು ಕಾಲಾಳುಪಡೆ
✪ ನಿಮ್ಮ ಧರ್ಮ ಮತ್ತು ಸಿದ್ಧಾಂತವನ್ನು ಆರಿಸಿ
✪ ವ್ಯಾಪಾರ ಮಾಡಿ ಮತ್ತು ತೆರಿಗೆಗಳನ್ನು ಸಂಗ್ರಹಿಸಿ
✪ ಭವಿಷ್ಯದ ಹೊಸ ಸಂಶೋಧನೆಗಳು ಮತ್ತು ತಂತ್ರಜ್ಞಾನಗಳನ್ನು ಕಲಿಯಿರಿ
ವಿವಿಧ ವ್ಯೂಹರಚನೆಗಳು ಹಾಗೂ ಕ್ರಿಯೆಯ ಸ್ವಾತಂತ್ರ್ಯವು ನಿಮಗಾಗಿ ಕಾಯುತ್ತಿದೆ. ಗೌರವ ಮತ್ತು ಶ್ರೇಷ್ಠತೆಗಾಗಿ ಹೋರಾಡಿ! ನಿಮ್ಮ ರಾಷ್ಟ್ರದ ನಿಜವಾದ ನಾಯಕರಾಗಿ!
ಈ ಕೆಳಗಿನ ಭಾಷೆಗಳಿಗೆ ಗೇಮ್ ಭಾಷಾಂತರಗೊಂಡಿದೆ: ಇಂಗ್ಲಿಷ್, ಸ್ಪ್ಯಾನಿಷ್, ಉಕ್ರೇನಿಯನ್, ಪೋರ್ಚುಗೀಸ್, ಫ್ರೆಂಚ್, ಚೈನೀಸ್, ರಷ್ಯನ್, ಟರ್ಕಿಶ್, ಪೋಲಿಷ್, ಜರ್ಮನ್, ಅರೇಬಿಕ್, ಇಟಾಲಿಯನ್, ಜಪಾನೀಸ್, ಇಂಡೋನೇಷಿಯನ್, ಕೊರಿಯನ್, ವಿಯೆಟ್ನಾಮೀಸ್, ಥಾಯ್.
ಅಪ್‌ಡೇಟ್ ದಿನಾಂಕ
ಅಕ್ಟೋ 3, 2025